School Chalo 2012

ವಗ್ಗದಲ್ಲಿ ಉಚಿತ ವೈದ್ಯಕೀಯ ಶಿಬಿರ

Wednesday, January 25th, 2012
ಬಂಟ್ವಾಳ: ಎಸ್‌ಡಿಪಿಐ, ಕಾವಳಪಡೂರು ವಲಯ ಮತ್ತು ಬಿ.ಎ ಆಸ್ಪತ್ರೆ ತುಂಬೆ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವು ಜ.1ರಂದು ಸರಕಾರಿ ಪದವಿ ಪೂರ್ವ ಕಾಲೇಜು ವಗ್ಗದಲ್ಲಿ ನಡೆಯಿತು.
ಬಿ. ಅಹ್‌ಮದ್ ಹಾಜಿ ಮುಹಿಯುದ್ದೀನ್ ತುಂಬೆ ಇವರು ಕಾರ್ಯಕ್ರಮವನ್ನು ಉದ್ಷಾಟಿಸಿದರು. ಎಂ.ಜೆ.ಎಮ್. ಬಾಂಬಿಲ ಇದರ ಖತೀಬರಾದ ಎ.ಯು. ನಝೀರ್ ಅಝ್‌ಹರಿ ಬೊಲ್ಮಿನಾರುಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕರವರು ವಹಿಸಿದ್ದರು. ಬಂಟ್ವಾಳ ವಲಯಾಧ್ಯಕ್ಷ ಶಾಹುಲ್ ಹಮೀದ್ ಎಸ್. ಎಚ್, ಪಿ. ಜಿನರಾಜ ಆರಿಗ, ಸಮಾಜ ಸೇವಕ ಅಬ್ದುಲ್ ರಝಾಕ್ ಬಾಂಬಿಲ, ಡಾ.ನಾರಾಯಣ ಭಟ್ ಕನಿಚ್ಚಾರ್, ಮಾಜಿ ದಲಿತ ಸಂಘದ ಕಾರ್ಯದರ್ಶಿ ರುಕ್ಮಯ, ಎಸ್‌ಡಿಪಿ ಬಂಟ್ವಾಳ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಕಾರ್ಯದರ್ಶಿ ಅಶ್ರಫ್ ಮಂಚಿ,  ಅಬ್ದುರ್ರಹ್ಮಾನ್, ಅಬೂಬಕ್ಕರ್ ಮದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 362 ಶಿಬಿರಾರ್ಥಿಗಳು ಪ್ರಯೋಜನವನ್ನು ಪಡೆದರು.ನಶ್ವರ್ ಬಾಂಬಿಲ ಸ್ವಾಗತಿಸಿ, ಸಮದ್ ವಗ್ಗ ವಂದಿಸಿದರು ಮತುತಿ ನಕಾಶ್ ಮುಸತಿಫ ಕಾರ್ಯಕ್ರಮ ವನ್ನು ನಿರೂಪಿಸಿದರು.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India