ರಾಜ್ಯ ಸರಕಾರ ಸಂವಿಧಾನವನ್ನು ಗೌರವಿಸಲಿ. ಪಾಪ್ಯುಲರ್ ಫ್ರಂಟ್ ರಾಜ್ಯ ಜನರಲ್ ಅಸೆಂಬ್ಲಿ ಆಗ್ರಹ
Monday, January 30th, 2012
ಮಂಗಳೂರು: ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಜನರಲ್ ಅಸೆಂಬ್ಲಿಯು ಜನವರಿ 28,29 - 2012 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರು ಫ್ರೀಢಂ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆರವರ ಭಾಷಣದೊಂದಿಗೆ ವಾರ್ಷಿಕ ಸಭೆಯು ಆರಂಭವಾಯಿತು. ಜನರಲ್ ಅಸೆಂಬ್ಲಿಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1.ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ದೇಶದ ಭದ್ರತೆಗೆ ಸಂಚಕಾರ:
ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿಯನ್ನು ತೆರೆಯುವ ಕೇಂದ್ರ ಸರಕಾರದ ನಿರ್ಧಾರವು ದೇಶದಲ್ಲಿ ನೀತಿಯನ್ನು ರೂಪಿಸುವುದರಲ್ಲಿ ಹೆಚ್ಚುತ್ತಿರುವ ಝಿಯೋನಿಸ್ಟ್ ರಾಷ್ಟ್ರದ ಪ್ರಭಾವಕ್ಕೆ ಪುರಾವೆಯಾಗಿದೆ. ಭಾರತ ಮತ್ತು ಇಸ್ರೇಲ್ ನ ಮಧ್ಯೆ ಹೆಚ್ಚುತ್ತಿರುವ ಸಂಬಂಧವು ದೇಶದ ಭವಿಷ್ಯಕ್ಕೆ ಅಪಾಯದ ಸೂಚನೆಯಾಗಿದೆ. ಜಗತ್ತಿನಲ್ಲೇ ನಂಬರ್ ಒನ್ ಭಯೋತ್ಪಾದಕ ದೇಶವಾಗಿರುವ ಮತ್ತು ಕಳೆದ 6 ದಶಕಗಳಿಂದ ಫೆಲಸ್ತೀನ್ ಜನತೆಯನ್ನು ಜನಾಂಗೀಯ ಹತ್ಯೆಗೈಯುತ್ತಿರುವ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಇಸ್ರೇಲನ್ನು ಭಯೋತ್ಪಾದನೆಯ ವಿರುದ್ಧ ಸಮರ ಎಂಬ ಹೆಸರಿನಲ್ಲಿ ಯುಪಿಎ ಸರಕಾರವು ಇಸ್ರೇಲ್‌ನ ನೆರವನ್ನು ಕೋರುತ್ತಿರುವುದು ದುರಂತವಾಗಿದೆ.
ಇಸ್ರೇಲ್‌ನೊದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಮತ್ತು ಇಸ್ರೇಲ್‌ನೊಂದಿಗಿನ ಎಲ್ಲಾ ರೀತಿಯ ಆಂತರಿಕ ಮತ್ತು ಅಂತರಾಷ್ಟ್ರೀಯ ಸಹಕಾರಗಳನ್ನು ತೊರೆಯಬೇಕೆಂದು ಸಭೆಯು ಆಗ್ರಹಿಸುತ್ತದೆ.
2.ಸಿಂಧಗಿಯಲ್ಲಿ ಪಾಕ್‌ಧ್ವಜ ಹಾರಾಟ - ನೈಜ ದೇಶದ್ರೋಹಿಗಳ ಬಣ್ಣ ಬಯಲು:
ಸಿಂಧಗಿಯಲ್ಲಿ ಪಾಕ್ ಧ್ವಜವನ್ನು ಹಾರಿಸಿದ ದೇಶದ್ರೋಹಿ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕೆಂದೂ, ತಪ್ಪಿತಸ್ಥರನ್ನು ಕಠಿಣಶಿಕ್ಷೆಗೊಳಪಡಿಸಬೇಕೆಂದೂ ಸಭೆಯು ಆಗ್ರಹಿಸುತ್ತದೆ.
ಪಾಪ್ಯುಲರ್ ಫ್ರಂಟ್ ಆಫ ಇಂಡಿಯಾ ಈ ಹಿಂದೆಯು ಇಂತಹಾ ಫ್ಯಾಶಿಸ್ಟ್ ಅಜೆಂಡಾಗಳನ್ನು ಹೊಂದಿದ ಸಂಘಟನೆಗಳನ್ನು ವಿರೋಧಿಸುತ್ತಾ ಬಂದಿದೆ. ಇದೀಗ ಇಂತಹ ಫ್ಯಾಶಿಸ್ಟ್ ಶಕ್ತಿಗಳ ಕುಕೃತ್ಯಗಳು ಬಯಲಾಗಿದೆ.
ರಾಷ್ಟ್ರ ಪೇಮದ ಗುತ್ತಿಗೆಯನ್ನು ಪಡೆದಂತೆ ಮಾತನಾಡುತ್ತಿರುವ ಬಿಜೆಪಿ ಬಹಿರಂಗವಾಗಿ ಇಂತಹ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನವು ಬಿಜೆಪಿಯ ಇಬ್ಬಂದಿತನವನ್ನು ಬಹಿರಂಗಗೊಳಿಸಿದೆಯೆಂದೂ ಸಭೆಯು ಅಭಿಪ್ರಾಯ ಪಟ್ಟಿತು.
3. ಭ್ರಷ್ಟಾಚಾರವನ್ನು ತಡೆಯಲು ಲೋಕಾಯುಕ್ತರನ್ನು ತಕ್ಷಣ ನೇಮಕ ಮಾಡಿ:
ರಾಜ್ಯ ಬಿಜೆಪಿ ಸರಕಾರದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕ್ಯಾಬಿನೆಟ್ ಮಂತ್ರಿಹಗಳೂ ಸೇರಿದಂತೆ ಹಲವರು ಭ್ರಷ್ಟಾಚಾರ, ಭೂಹಗರಣಗಳಲ್ಲಿ ಭಾಗಿಯಾಗಿದ್ದು ಈಗಾಗಲೇ ಇವರೆಲ್ಲರ ಮೇಲೆ ಮೊಕದ್ದಮೆಗಳು ದಾಖಲಾಗಿವೆ.
ಇಂತಹ ಆರೋಪಿಗಳನ್ನು ರಕ್ಷಿಸುವ ನಿಟ್ಟಿನಿಂದ ಲೋಕಾಯುಕ್ತರನ್ನು ನೇಮಿಸುವಲ್ಲಿ ಬಿಜೆಪಿ ಸರಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ತಕ್ಷಣವೇ ಲೋಕಾಯುಕ್ತರನ್ನು ನೇಮಿಸಿ ತನಿಖೆಯ ಹಾದಿಯನ್ನು ಚುರುಕುಗೊಳಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.
4.ಸರಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಅಸಾಂವಿಧಾನಿಕ:
ಪ್ರಾಥಮಿಕ ಶಿಕ್ಷಣವು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದ್ದು ಇದೀಗ ಬಿಜೆಪಿ ರಾಜ್ಯ ಸರಕಾರವು ವಿದ್ಯಾರ್ಥಿಗಳಿಲ್ಲವೆಂಬ ಸಬೂಬು ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ತಾಳಿರುವುದನ್ನು ಸಭೆಯು ಖಂಡಿಸಿತು. ಸಂವಿಧಾನದ ಆಶಯದಂತೆ ಪ್ರತಿಯೋರ್ವ ವಿಧ್ಯಾರ್ಥಿಗೂ ಪ್ರಾಥಮಿಕ ಶಿಕ್ಷಣವು ದೊರಕುವ ರೀತಿಯಲ್ಲಿ ನೀತಿ ನಿಯಮಗಳನ್ನು ಸರಕಾರವು ರೂಪಿಸಲು ತಯಾರಾಗಬೇಕೆಂದು ಸಭೆಯು ಗ್ರಾಹಿಸಿತು.
5.ಸಮಾಜೋತ್ಸವಗಳು ಕೋಮು ವಿದ್ವೇಷವನ್ನು ಹರಡುತ್ತಿದೆ:
ರಾಜ್ಯದಾದ್ಯಂತ ಸಮಾಜೋತ್ಸವಗಳನ್ನು ನಡೆಸಿದ ಸಂಘಪರಿವಾರವು ಹಿಂದೆಯೂ ರಾಜ್ಯದಲ್ಲಿ ಅಶಾಂತಿ ಹರಡಲು ಕಾರಣವಾಗಿದೆ. ಇದೀಗ ಪುನಃ ಸಂಘಪರಿವಾರವು ಸಮಾಜೋತ್ಸವಗಳನ್ನು ನಡೆಸಿ ಮುಸ್ಲಿಂ, ಕ್ರೈಸ್ತ ಧರ್ಮಗಳನ್ನು ಅವಹೇಳನ ನಡೆಸಿ ಕೋಮು ವಿದ್ವೇಷಕ ಭಾಷಣಗಳನ್ನು ನಡೆಸುತ್ತಿದೆ. ಇಂತಹ ಸಮಾಜದ್ರೋಹಿಗಳ ವಿರುದ್ಧ ಪೊಲೀಸ್ ಇಲಾಖೆಯು ಕೇಸು ದಾಖಲಿಸಬೇಕೆಂದೂ ಸರಕಾರವು ಕಠಿಣ ಕ್ರಮಕೈಗೊಂಡು ರಾಜ್ಯದ ಭಾವೈಕ್ಯತೆಯನ್ನು ಕಾಪಾಡಬೇಕೆಂದೂ ಸಭೆಯು ಆಗ್ರಹಿಸುತ್ತದೆ.
ಪ್ರಧಾನ ಕಾರ್ಯದರ್ಶಿ ರಿಯಾಝ್ ಪಾಶಾ ರವರು ವಾರ್ಷಿಕ ವರದಿಯನ್ನು ಮಂಡಿಸಿದರು. ಜನರಲ್ ಅಸೆಂಬ್ಲಿಯ 2ನೇ ದಿನ ರಾಜ್ಯದ ಸಮಕಾಲೀನ ರಾಜಕೀಯದ ಬಗ್ಗೆ ಮುಕ್ತ ಚರ್ಚೆ ನಡೆಯಿತು.
ಪ್ರಧಾನ ಕಾರ್ಯದರ್ಶಿ
ರಿಯಾಝ್ ಪಾಶ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ
A neo social movement for a new India of equal rights to all Indians

















































