School Chalo 2012

ರಾಜಕೀಯ ಪಕ್ಷಗಳ ಓಟ್ ಬ್ಯಾಂಕ್ ಆಗದಿರಿ: ಜನತೆಗೆ ಪಾಪ್ಯುಲರ್ ಪ್ರಂಟ್ ಕರೆ

Wednesday, January 25th, 2012
NGA
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಂದ ನ್ಯಾಶನಲ್ ಜನರಲ್ ಅಸೆಂಬ್ಲಿಯು ಕೇರಳದ ಮಲಪ್ಪುರಮ್ ಜಿಲ್ಲೆಯ ಮಲಬಾರ್ ಹೌಸ್‌ನಲ್ಲಿ ಜ.21ರಂದು ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ಸಾಮಾಜಿಕ-ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ದೇಶದಾದ್ಯಂತ ಮುಸ್ಲಿಮರು ಹಾಗೂ ಇತರ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸಲಾಯಿತು.
ದಲಿತ ಮತ್ತು ಹಿಂದುಳಿದ ಜಾತಿಗಳ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ ಮತ್ತು ನಡೆಸುತ್ತಿರುವ ರಾಜ್ಯಗಳಲ್ಲಿ ಮುಸ್ಲಿಮರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಆ ಪಕ್ಷಗಳು ವಿಫಲವಾದ ಬಗ್ಗೆ ಸಭೆಯು ಅಸಮಾಧಾನವನ್ನು ವ್ಯಕ್ತಪಡಿಸಿತು. ಈ ಪಕ್ಷಗಳು ಜಾತಿಯಾಧಾರಿತ ರಾಜಕೀಯ ಮತ್ತು ಮುಸ್ಲಿಮರನ್ನು ಓಲೈಸುವ ಮೂಲಕ ಅಧಿಕಾರಕ್ಕೇರಿತ್ತು ಅಥವಾ ಪ್ಪಾಬಲ್ಯವನ್ನು ಪಡೆದಿತ್ತು. ದುರದೃಷ್ಟಕರವೆಂದರೆ, ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವುದಕ್ಕೆ ಈ ಪಕ್ಷಗಳೂ ವಿಫಲವಾದವು. ಅವು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಮಾರ್ಗವನ್ನೇ ಬಳಸಿವು ಮತ್ತು ಮುಸ್ಲಿಮರನ್ನು ಭಿನ್ನಗೊಳಿಸುವುದಕ್ಕೆ ಹಾಗೂ ತಿರಸ್ಕರಿಸುವುದಕ್ಕೆ ಪ್ರಯತ್ನಪಟ್ಟವು. ಮುಸ್ಲಿಮ್ ಸಮುದಾಯದಿಂದ ನಿಜವಾದ ರಾಜಕೀಯ ಶಕ್ತಿಯು ಉದಯವಾಗುವುದನ್ನು ಅವುಗಳು ಇಷ್ಟಪಡಲಿಲ್ಲ. ಮುಸ್ಲಿಮ್ ಹೋರಾಟಗರಾರು ಮತ್ತು ಸಂಘಟನೆಗಳ ವಿರುದ್ಧ ಪೊಲೀಸ್ ಕ್ರಮವನ್ನು ಮುಂದುವರಿಸುವುದರೊಂದಿಗೆ ಸಮುದಾಯವನ್ನು ಭಯಪಡಿಸುವ ಮತ್ತು ಅಭದ್ರತೆಗೆ ತಳುವುದಕ್ಕಾಗಿ ಪೊಲೀಸರನ್ನು ಅಥವಾ ಬೇಹುಗಾರಿಕಾ ಸಂಸ್ಥೆಗಳನ್ನು ಬಳಸುವುದರಲ್ಲಿ ಉತ್ತರ ಪ್ರದೇಶದ ಬಿಎಸ್‌ಪಿ ಭಿನ್ನವಾಗಿರಲಿಲ್ಲ. ಹೊಸದಾಗಿ ಉದಯವಾದ ಎಸ್‌ಡಿಪಿಐ ಮತ್ತು ಸಮಾನ ಮನಸ್ಕ ಪಕ್ಷಗಳು ಮಾತ್ರವೇ ಮುಸ್ಲಿಮರಲ್ಲಿರುವ ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಬಲ್ಲುದು ಮತ್ತು ಅವರನ್ನು ಭಯ ಮುಕ್ತರನ್ನಾಗಿ ಮತ್ತು ಹಸಿವು ಮುಕ್ತರನ್ನಾಗಿ ಮಾಡಬಲ್ಲುದು ಎಂದು ಸಭೆ ಅಭಿಪ್ರಾಯಿಸಿತು. ಆದುದರಿಂದ ವಿವಿಧ ಪಕ್ಷಗಳ ವೋಟ್ ಬ್ಯಾಂಕಾಗಿರದೆ ಎಸ್‌ಡಿಪಿಐ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಡೆಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಉತ್ತರ ಪ್ರದೇಶದ ಮತ್ತು ಇತರ ರಾಜ್ಯಗಳ ಮತದಾರರಿಗೆ ಸಭೆ ಕರೆ ನೀಡಿದೆ.
ಇನ್ನೊಂದು ನಿರ್ಣಯದಲ್ಲಿ, ಭಾರತ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಬಂಧವು ದೇಶದ ಭವಿಷ್ಯಕ್ಕೆ ಅಪಾಯದ ಸೂಚನೆಯಾಗಿದೆ ಎಂದು ಸಭೆ ಹೇಳಿದೆ. ಜಗತ್ತಿನಲ್ಲೇ ನಂಬರ್ ವನ್ ಟೆರರಿಸ್ಟ್ ರಾಷ್ಟ್ರವಾಗಿರುವ ಮತ್ತು ಕಳೆದ ಆರು ದಶಕಗಳಿಂದ ಫೆಲೆಸ್ತೀನ್ ಜನತೆಯನ್ನು ಮುಕ್ತವಾಗಿ ಹಿಂಸಿಸುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಇಸ್ರೇಲನ್ನು ಯುಪಿಎಯ ಎಲ್ಲಾ ರಂಗಗಳೂ ಕೆಂಪು ಹಾಸಿನೊಂದಿಗೆ ಸ್ವಾಗತಿಸುತ್ತಿದೆ. ರಕ್ಷಣೆ, ಬೇಹುಗಾರಿಕೆ ಅಥವಾ ಕೃಷಿ  ಈ ಎಲ್ಲಾ ವಿಭಾಗಗಳಲ್ಲೂ ಭಾರತವು ಇಸ್ರೇಲ್ ಉತ್ಪಾದನೆಗಳ ಪ್ರಮುಖ ಗ್ರಾಹಕನಾಗಿದೆ. ಅಲ್ಲದೆ ಭಯೋತ್ಪಾದನೆಯ ವಿರುದ್ದ ಸಮರವೆಂಬ ನೆಪದಲ್ಲಿ ಯುಪಿಎ ಸರಕಾರವು ನಿರಂತರವಾಗಿ ಆಂತರಿಕ ಭದ್ರತೆಗೆ ಇಸ್ರೇಲ್‌ನ ನೆರವನ್ನು ಕೋರುತ್ತಿರುವುದು ದುರಂತವಾಗಿದೆ. ಇಸ್ರೇಲ್‌ನೊಂದಿಗೆ ರಾಯಭಾರಿ ಸಂಂಬಂಧವನ್ನು ಸ್ಥಾಪಿಸಿದ ನಂತರವೇ ಭಾರತದಲ್ಲಿ ಹಲವು ಸ್ಫೋಟಗಳು ಸಂಭವಿಸಿರುವುದು ಶಂಕಾಸ್ಪದವಾಗಿದೆ. ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿಯನ್ನು ತೆರೆಯುವ ನಿರ್ಧಾರವು ದೇಶದ ನೀತಿಯನ್ನು ರೂಪಿಸುವುದರಲ್ಲಿ     ಹೆಚ್ಚುತ್ತಿರುವ ಝಿಯೋನಿಸ್ಟ್ ರಾಷ್ಟ್ರದ ಪ್ರಭಾವಕ್ಕೆ ಪುರಾವೆಯಾಗಿದೆ. ಇಸ್ರೇಲ್‌ನೊಂದಿಗಿನ ಎಲ್ಲಾ ಸಂಬಂಧವನ್ನು ಕಡಿಯಬೇಕು ಮತ್ತು ಅದರೊಂದಿಗಿನ ಎಲ್ಲಾ ರೀತಿಯ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಸಹಕಾರಗಳನ್ನು ತೊರೆಯಬೇಕು ಎಂದು ಸಭೆ ಹೇಳಿದೆ.
ಧಾರ್ಮಿಕ ಅಲ್ಪಸಂಖ್ಯಾತರಿಗೆ  4.5% ಮೀಸಲಾತಿಯನ್ನು ನೀಡುವ ಕೇಂದ್ರ ಸರಕಾರದ ನಿರ್ಧಾರವು ಸಕಾರತ್ಮಕ ಹೆಜ್ಜೆಯಾಗಿದೆ. ಆದರೆ ಅದು ಹಲವು ಸಮಸ್ಯೆಗಳನ್ನು ಮತ್ತು ಕೊರತೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಪರಿಹರಿಸಬೇಕಾಗಿದೆ. ಇದು ಇಡೀ ಮುಸ್ಲಿಮ್ ಸಮುದಾಯವನ್ನು ವ್ಯಾಪಿಸುವುದಿಲ್ಲ ಮಾತ್ರವಲ್ಲದೆ, ಮಿಶ್ರಾ ಆಯೋಗವು ಹೇಳಿದ ಒಬಿಸಿ ಮುಸ್ಲಿಮರಿಗೆ ಕನಿಷ್ಠ 6 ಶೇಕಡ ಸಬ್ ಕೋಟವನ್ನೂ ನಿರಾಕರಿಸುತ್ತದೆ. ಇದೊಂದು ಕೇವಲ ರಾಜಕೀಯ ಗಿಮಿಕ್ ಆಗಿದೆ ಎಂದು ಸಭೆ ಅಭಿಪ್ರಾಯಿಸಿದೆ. ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಕೆಲವು ಸಚಿವರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳ ಹಿಂದೆ ಕೇವಲ ಉತ್ತರ ಪ್ರದೇಶ ಮತ್ತು ಇತರ ರಾಜ್ಯಳ ಚುನಾವಣೆಯಲ್ಲಿ ಮುಸ್ಲಿಮ್ ಓಟ್‌ಗಳನ್ನು ಆಕರ್ಷಿಸುವ ಉದ್ದೇಶ ಅಡಗಿದೆ. ಮುಸ್ಲಿಮರು ರಾಜಕೀಯವಾಗಿ ಹೆಚ್ಚು ಪ್ರಜ್ಞಾವಂತರಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಕೇವಲ  ಭರವಸೆಗಳು ಸಾಕಾಗುವುದಿಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥೈಸಿಕೊಳ್ಳಬೇಕಾಗಿದೆ. ಯುಪಿಎ ಸರಕಾರವು ಮಾತುಗಳನ್ನು ಕ್ರಮವಾಗಿ ಬದಲಾಯಿಸಬೇಕು ಮತ್ತು ರಂಗನಾಥ ಮಿಶ್ರಾ ಆಯೋಗವು ಶಿಫಾರಸ್ಸು ಮಾಡಿದಂತೆ ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಬೇಕು ಎಂದು ಸಭೆ ಆಗ್ರಹಿಸುತ್ತದೆ.
ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ನೀಡುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯಗಳಿರುವುದು ಭಾಸವಾಗುತ್ತದೆ. ದಿಲ್ಲಿ ಪೊಲೀಸರಿಂದ ಅಮಾಯಕ ಮುಸ್ಲಿಮ್ ಯುವಕರು ಬರ್ಬರವಾಗಿ ಹತ್ಯೆಗಯ್ಯಲ್ಪಡುವುದಕ್ಕೆ ಬಾಟ್ಲಾ ಹೌಸ್ ನಕಲಿ ಎನ್‌ಕೌಂಟರ್ ಕೇಸ್ ಒಂದು ಉತ್ತಮ ದೃಷ್ಟಾಂತವಾಗಿದೆ. ಇದು ಕೇವಲ ಎನ್‌ಕೌಂಟರ್ ಮಾತ್ರವಲ, ಬದಲಾಗಿ ಮುಸ್ಲಿಮರನ್ನು ವಿಶೇಷವಾಗಿ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸುವ ಗಂಭೀರ ಪ್ರಯತ್ನವಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಸಂತ್ರಸ್ತರಿಗೆ ನ್ಯಾಯವನ್ನು ನೀಡುವ ಬಗ್ಗೆ ಗಮನಹರಿಸುತ್ತಿಲ್ಲ ಮತ್ತು ಕೇವಲ ಮಾತಿನಲ್ಲಿ ಪರಸ್ಪರ ಸ್ಫರ್ಧಿಸುತ್ತಿವೆ. ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಈ ಬರ್ಬರ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಸಭೆಯು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿರುವ ಹೆಣ್ಣು ಮಕ್ಕಳನ್ನು ಆಕರ್ಷಿಸುವುದಕ್ಕಾಗಿ ಕೇರಳ ಹಾಗೂ ಕರ್ನಾಟಕದಲ್ಲಿ ಲವ್ ಜಿಹಾದ್ ಎಂಬ ಯೋಜನೆ ಇದೆಯೆಂದು ಆರೋಪಿಸಿ ಮುಸ್ಲಿಮರ ವಿರುದ್ಧ ಹುಚ್ಚು ಅಭಿಯಾನವನ್ನು ಆರಂಭಿಸಿದ ಜನರನ್ನು ಕಾನೂನು ಕ್ರಮಕ್ಕೊಳಪಡಿಸುವಂತೆ ಸಭೆಯು ಅಧಿಕಾರಿಗಳಿಗೆ ಕರೆ ನೀಡಿದೆ. ಸಮುದಾಯಗಳ ನಡುವೆ ಸಂಶಯ ಮತ್ತು ಹಗೆಯನ್ನುಂಟುಮಾಡುವ ಉದ್ದೇಶದಿಂದ ಹಾಗೂ ಮುಸ್ಲಿಮ್ ಯುವಕರನ್ನು ಕ್ಯಾಂಪಸ್‌ನಿಂದ ದೂರಗೊಳಿಸುವ ನಿಟ್ಟಿನಲ್ಲಿ ಹಿಂದುತ್ವ ಗುಂಪುಗಳು ಸೃಷ್ಟಿಸಿದ ಒಂದು ಸಂಚಾಗಿದೆ ಲವ್ ಜಿಹಾದ್. ಕೆಲವುದಿನ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಲವ್ ಜಿಹಾದ್‌ಗೆ ದೊಡ್ಡ ಮಟ್ಟದ ಪ್ರಚಾರವನ್ನು ನೀಡಿರುವುದರ ಬಗ್ಗೆ ನ್ಯಾಶನಲ್ ಜನರಲ್ ಅಸೆಂಬ್ಲಿ ಬೇಸರ  ವ್ಯಕ್ತಪಡಿಸಿದೆ. ಈ ನಕಲಿ ಸುದ್ದಿಗಳನ್ನು ಮಾಧ್ಯಮಗಳು ಹಿಂದೆಗೆಯಬೇಕು ಮತ್ತು ತಮ್ಮ ಓದುಗರ ಕ್ಷಮೆ ಕೋರಬೇಕು ಎಂದು ಸಭೆ ಕರೆ ನೀಡಿದೆ.
ಕರ್ನಾಟಕದ ಬಿಜಾಪುರದ ಸಿಂಧಗಿಯಲ್ಲಿ ಕೋಮು ಗಲಭೆಯನ್ನು ಸೃಷ್ಟಿಸುವ ಹುನ್ನಾರದಿಂದ ಪಾಕಿಸ್ತಾನದ ಧ್ವಜವನ್ನು ಹಾರಿಸಿದ ಆರೆಸ್ಸೆಸ್ ಶಕ್ತಿಗಳನ್ನು ಬಂಧಿಸಲು ಪೊಲೀಸರು ಶಕ್ತರಾಗಿರುವುದು ಸಂತಸದ ವಿಷಯವಾಗಿದೆ. ಇಂತಹ ಕೃತ್ಯಗಳು ಆರೆಸ್ಸೆಸ್‌ನದ್ದಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಈ ಹಿಂದೆ ಹಲವು ಬಾರಿ ಹೇಳುತ್ತಾ ಬಂದಿದೆ.
ಮುಸ್ಲಿಮ್ ಹೋರಾಟಗಾರರು, ರಾಜಕೀಯ ನೇತಾರರು ಮತ್ತು ಧಾರ್ಮಿಕ ವಿದ್ವಾಂಸರ ಈಮೇಲ್ ಸಂಪರ್ಕಗಳನ್ನು ಹ್ಯಾಕ್ ಮಾಡುವ ಕೇರಳ ಪೊಲೀಸರ ಪ್ರಯತ್ನವನ್ನೂ ಅಸೆಂಬ್ಲಿ ಖಂಡಿಸಿದೆ. ಇದು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನುಂಟುಮಾಡುವುದಕ್ಕಾಗಿ ಹಾಗೂ ಜನಾಂಗೀಯ ಮತ್ತು ಧಾರ್ಮಿಕ ತಾರತಮ್ಯವನ್ನುಂಟುಮಾಡುವುದಕ್ಕಾಗಿ ಸಾಮ್ರಾಜ್ಯಶಾಹಿ ಶಕ್ತಿಗಳು ಆರಂಭಿಸಿದ ಜನಾಂಗೀಯ ತಾರತಮ್ಯದ ಭಾಗವಾಗಿದೆಯೆಂದು ನಾವು ಭಾವಿಸುತ್ತೇವೆ. ಜಾತ್ಯತೀತ ಹಾಗೂ ಅಲ್ಪಸಂಖ್ಯಾತ ಪರ ಸರಕಾರವೆಂದು ಕರೆದುಕೊಳ್ಳುವ ರಾಜ್ಯದಲ್ಲಿ ಈ ರೀತಿ ಪೊಲೀಸ್ ಹಸ್ತಕ್ಷೇಪ ನಡೆಯುತ್ತಿದೆಯೆಂಬುದು ಇನ್ನೂ ನಿರಾಶದಾಯಕವಾಗಿದೆ ಎಂದು ಸಭೆ ಅಭಿಪ್ರಾಯಿಸಿದೆ.
ಕ್ಷುಲ್ಲಕ ಕೇಸುಗಳಲ್ಲಿ ಜಾಮೀನು ನಿರಾಕರಿಸಲ್ಪಟ್ಟು ದೀರ್ಘ ಅವಧಿಯವರೆಗೆ  ಜೈಲಿನಲ್ಲಿ ಕೊಳೆತು ನಂತರ ದೋಷ ಮುಕ್ತರಾಗಿ ಬಿಡುಗಡೆಗೊಳ್ಳುವ ವ್ಯಕ್ತಿಗಳಿಗೆ ಸರಿಯಾದ ಪರಿಹಾರವನ್ನು ನೀಡುವುದಕ್ಕಾಗಿ ಅಪರಾಧಿ ದಂಡ ಸಂಹಿತೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕೆಂದು ಎನ್‌ಜಿಎ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಚೆಯರ್‌ಮ್ಯಾನ್ ಇ.ಎಂ.ಅಬ್ದುಲ್ ರಹಿಮಾನ್‌ರವರ ಪ್ರಾಸ್ತಾವಿಕ ಭಾಷಣದೊಂದಿಗೆ ವಾರ್ಷಿಕ ಸಭೆಯು ಆರಂಭವಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ‘ಸಾಮಾಜಿಕ ನ್ಯಾಯ ಸಾಮಾವೇಶ’ಕ್ಕೆ ಉತ್ತರ ಭಾರತದಿಂದ ಬೃಹತ್ ಸಂಖ್ಯೆಲ್ಲಿ ಜನರು ಬಂದಿರುವುದು ಜನರು ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಹೊಸ ಚಳುವಳಿಯೊಂದರ ಅನ್ವೇಷಣೆಯಲ್ಲಿದ್ದಾರೆ ಎಂಬುವುದನ್ನು ಸಾಬೀತುಪಡಿಸಿದೆ. ದೇಶದ ಹೊಸ ಭೂಮಿ ಮತ್ತು ಸಮುದಾಯಗಳನ್ನು ತಲುಪಲು ಈ ಹೊಸ ಆರಂಭವನ್ನು ಸವಾಲಾಗಿ ಸ್ವೀಕರಿಸುವಂತೆ ಅವರು ಪ್ರತಿನಿಧಿಗಳನ್ನು ಎಚ್ಚರಿಸಿದರು. ರಾಷ್ಟ್ರೀಯ ಹಾಗೂ ಸ್ಥಳೀಯ ವಿಷಯಗಳಲ್ಲಿ ಸಮಯೋಚಿತ ಮತ್ತು ಪರಿಣಾಮಕಾರಿ ಹಸ್ತಕ್ಷೇಪದ ಮೂಲಕ ಹಾಗೂ ಜನರ ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಜನರನ್ನು ಸೇರಿಸುವುದು ಸಾಧ್ಯ ಎಂದು ಅವರು ನೆನಪಿಸಿದರು.
ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್ ಸಂಘಟನೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಮುವಾದಿ ಫ್ಯಾಶಿಷ್ಟ್ ಸಂಘಟನೆಗಳು ಮತ್ತು  ಪೊಲೀಸ್ ಇಲಾಖೆ, ಆಡಳಿತ, ಬೇಹುಗಾರಿಕೆ ಹಾಗೂ ಮಾಧ್ಯಮದಲ್ಲಿರುವ ಅವರ ಏಜೆಂಟ್‌ಗಳಿಂದ ಪಾಪ್ಯುಲರ್ ಫ್ರಂಟ್‌ನ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿರುವ ಹೊರತಾಗಿಯೂ ಸಂಘಟನೆಯು ಗಣನೀಯವಾಗಿ ವಿಸ್ತಾರ ಬೆಳವಣೆಗೆಯನ್ನು ಕಂಡಿದೆಯೆಂಬುದನ್ನು ವರದಿ ತಿಳಿಸಿತು. ದೇಶದಾದ್ಯಂತ ಸದಸ್ಯರ ಸಂಖ್ಯೆ, ಬೆಂಬಲಿಗರು ಮತ್ತು ಸಹಾಯಕರ ಸಂಖ್ಯೆಯಲ್ಲಿ ಹೆಚ್ಚಳುವಾಗುತ್ತಿರುವುದನ್ನು ವರದಿ ತೋರಿಸಿತು. ವರದಿ ಮಂಡನೆಯ ಬಳಿಕ ವಿಸ್ತೃತ ಚರ್ಚೆಯೊಂದು ನಡೆಯಿತು. ಕೇಂದ್ರ ಸೆಕ್ರೇಟರಿಯೇಟ್ ಸದಸ್ಯರು ಮತ್ತು ರಾಜ್ಯಾಧ್ಯಕ್ಷರುಗಳಾದ ಅಶ್ರಫ್ ಮೌಲವಿ (ಕೇರಳ), ಇಲ್ಯಾಸ್ ಮುಹಮ್ಮದ್ ತುಂಬೆ (ಕರ್ನಾಟಕ), ಎ.ಎಸ್.ಇಸ್ಮಾಯೀಲ್ (ತಮಿಳುನಾಡು), ಮುಹಮ್ಮದ್ ಆರಿಫ್ ಅಹ್ಮದ್ (ಆಂಧ್ರ ಪ್ರದೇಶ), ಮುಹಮ್ಮದ್ ಕಲೀಮುಲ್ಲಾ ಸಿದ್ದೀಕಿ (ದಿಲ್ಲಿ), ಎ.ಮುಹಮ್ಮದ್ ಶಾಫಿ (ರಾಜಸ್ಥಾನ) ಮುಹಮ್ಮದ್ ಶಹಾಬುದ್ದೀನ್ (ಪಶ್ಚಿಮ ಬಂಗಾಳ), ಮುಫ್ತಿ ಅರ್ಶದ್ ಕಾಸಿಮಿ (ಮಣಿಪುರ) ಚರ್ಚೆಯ ನೇತೃತ್ವ ವಹಿಸಿದ್ದರು.
ನ್ಯಾಶನಲ್ ಜನರಲ್ ಅಸೆಂಬ್ಲಿಯ ದ್ವಿತೀಯ ದಿನದಂದು ಭಾರತದ ಸಮಕಾಲೀನ ರಾಜಕೀಯದ ಬಗ್ಗೆ ಮುಕ್ತ ಚರ್ಚೆ ನಡೆಯಿತು. ರಾಷ್ಟ್ರೀಯ ಕಾರ್ಯಕಾರಿ ಸಭೆಯ ಸದಸ್ಯ ಅನೀಸ್ ಅಹ್ಮದ್ ಸೋಶಿಯಲ್ ನೆಟ್‌ವರ್ಕಿಂಗ್‌ನ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಭಾಷೆಯಲ್ಲಿ  ಸಾಮಾಜಿಕ ನ್ಯಾಯ ಸಮಾವೇಶದ ವೀಡಿಯೊ ಡಾಕ್ಯುಮೆಂಟರಿಯನ್ನು ಬಿಡುಗಡೆಗೊಳಿಸಲಾಯಿತು. ಚರ್ಚೆಯ ನಂತರ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಉಪಾಧ್ಯಕ್ಷ ಮುಹಮ್ಮದ್ ಅಲಿ ಜಿನ್ನಾರವರ ಸಮಾರೋಪ ಭಾಷಣದೊಂದಿಗೆ ಎರಡು ದಿನಗಳ ಕಾರ್ಯಕ್ರಮವು ಕೊನೆಗೊಂಡಿತು.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India