ಬೆಳಗಾವಿ: ಎಸ್‌ಡಿಪಿಐಯಿಂದ ಆರೋಗ್ಯ ತಪಾಸಣಾ ಶಿಬಿರ
Wednesday, February 22nd, 2012
ಬೆಳಗಾವಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ವಡ್ಗಾಂವ್ ಸಮಿತಿ ಹಾಗೂ ವಡ್ಗಾಂವ್ ಜಮಾಅತ್‌ನ ಜಂಟಿ ಆಶ್ರಯದೊಂದಿಗೆ ಇತ್ತೀಚೆಗೆ ಇಲ್ಲಿ ಬಡವರಿಗಾಗಿ ವೈದ್ಯಕೀಯ ಶಿಬಿರವೊಂದನ್ನು ಆಯೋಜಿಸಲಾಯಿತು.
ಶಿಬಿರಕ್ಕೆ ಶೈಖ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ವೈದ್ಯರನ್ನು ಒದಗಿಸಿತ್ತು. ಎಸ್‌ಡಿಪಿಐ ವಡ್ಗಾಂವ್ ಸಮಿತಿ ಅಧ್ಯಕ್ಷ ಮುಝಫ್ಫರ್ ಮುಜಾವರ್, ಅಸದ್ ಆರ್ ಹನ್ನೂರಿ, ತಾಜುದ್ದೀನ್, ಸದ್ದಾಮ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎಂ.ಎಂ.ಮುಜಾವರ್ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಶಾದ್ ೈಬಿ, ವಡ್ಗಾಂವ್ ಜಮಾಅತ್‌ನ ನೇತಾರರಾದ ಮೆಹಬೂಬ್ ಮುಲ್ಲಾ, ಕುತುಬ್ ಮುಜಾವರ್ ಮತ್ತು ಹಝ್ರತ್ ನಸೀಮ್ ಖಾದ್ರಿ ಸಾಹೆಬ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹಮೀದ್ ಇನಾಮ್ದಾರ್ ವಂದಿಸಿದರು.
A neo social movement for a new India of equal rights to all Indians

















































