ಬಿ.ಸಿ.ರೋಡ್: ಎಸ್‌ಡಿಪಿಐ, ಪಾಪ್ಯುಲರ್ ಫ್ರಂಟ್‌ನಿಂದ ಕ್ರೀಡಾಕೂಟ
Wednesday, February 1st, 2012
ಈ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ನಂದರಬೆಟ್ಟು ಘಟಕಾಧ್ಯಕ್ಷ ನಿಝಾಮುದ್ದೀನ್ ರವರು ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ವಲಯ ಅಧ್ಯಕ್ಷರಾದ ಶಾಹುಲ್ ಹಮಿದ್ ಎಸ್.ಎಚ್. ರವರು ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ, ಪಾಪ್ಯುಲರ್ ಫ್ರಂಟ್ ಬಿ.ಸಿ.ರೋಡ್ ವಲಯಾಧ್ಯಕ್ಷ ಮುಹಮ್ಮದ್ ಇಕ್ಬಾಲ್ , ಎಸ್‌ಡಿಪಿಐ ಬಂಟ್ವಾಳ ಪುರಸಭಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಎಮ್.ಎನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ, ಎಸ್.ಡಿ.ಪಿ.ಐ ನಂದರಬೆಟ್ಟು ಘಟಕಾಧ್ಯಕ್ಷ ಅಬ್ದುಲ್ ರಫೀಕ್ ಎ.ಕೆ, ಅಹ್ಮದ್ ಕುಂಞಿ ಇವರುಗಳು ಉಪಸ್ಥಿತರಿದ್ದರು.
ಈ ಸಾರ್ವಜನಿಕ ಕ್ರೀಡಾ ಕೂಟದಲ್ಲಿ ವಾಲಿಬಾಲ್, ಕಬಡ್ಡಿ, ಗುಂಡೆಸೆತ, ದೂರ ಜಿಗಿತ, ಸ್ಟೆಂಪ್ ಶೂಟ್, ಓಟ ಮೊದಲಾದ ಕ್ರೀಡೆಗಳನ್ನು ವಯಸ್ಕರಿಗೆ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪೌಢಶಾಲಾ ವಿಭಾಗದ ಮತ್ತು ಪುಟಾಣಿ ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದು, ವಾಲಿಬಾಲ್ ಪಂದ್ಯದಲ್ಲಿ ಪರ್ಲಿಯಾ ತಂಡವು ಪ್ರಥಮ ಸ್ಥಾನ ಮತ್ತು ತಲಪಾಡಿ ತಂಡಕ್ಕೆ ದ್ವಿತೀಯ ಸ್ಥಾನ ಹಾಗೂ ಕಬ್ಬಡಿ ಪಂದ್ಯದಲ್ಲಿ ನಂದರಬೆಟ್ಟು ತಂಡ ಪ್ರಥಮ ಮತ್ತು ಬಿ.ಸಿ ಬಾಯ್ಸ ದ್ವಿತೀಯಾ ಸ್ಥಾನವನ್ನು ಪಡೆದಿದೆ.
ಅಪರಾಹ್ಣ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ನಂದರಬೆಟ್ಟು ಘಟಕಾಧ್ಯಕ್ಷ ಅಬ್ದುಲ್ ರಫೀಕ್ ಎ.ಕೆ ರವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪಾಪ್ಯುಲರ್ ಫ್ರಂಟ್ ಬಂಟ್ವಾಳ ವಲಯ ಕಾರ್ಯದರ್ಶಿ ಇಜಾಝ್ ಅಹ್ಮದ್, ಪಾಪ್ಯುಲರ್ ಫ್ರಂಟ್ ಪರ್ಲಿಯಾ ಏರಿಯಾ ಅಧ್ಯಕ್ಷ ಇಕ್ಬಾಲ್ ಪರ್ಲಿಯಾ ಭಾಗವಹಿಸಿ ವಿಜೇತ ತಂಡಗಳಿಗೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯಾ ಮತ್ತು ತೃತೀಯ ಸ್ಥಾನ ಪಡೆದ ಕ್ರೀಡಾ ಪಟುಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಎಸ್.ಡಿ.ಪಿ.ಐ ನಂದರಬೆಟ್ಟು ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು ರವರು ಸಾರ್ವಜನಿಕ ಕ್ರೀಡಾಕೂಟದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.
A neo social movement for a new India of equal rights to all Indians

















































