ಬಜಪೆ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಪಾಪ್ಯುಲರ್ ಫ್ರಂಟ್ ಖಂಡನೆ
Wednesday, January 25th, 2012
ಬಜಪೆಯಲ್ಲಿ ವಿದ್ಯಾರ್ಥಿಗಳ ಮೇಲಾಗಿರುವ ಹಲ್ಲೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜಪೆ ವಲಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
ವಿದ್ಯಾರ್ಥಿಗಳ ಮೇಲಾಗಿರುವ ಹಲ್ಲೆ ಇದು ಮೊದಲೇನಲ್ಲ. ಈ ಹಿಂದೆ ಮಹಿಳೆಯರನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದರುವುದನ್ನು ಪ್ರಶ್ನಿಸಿಸಲು ಹೋದ ಮಹಿಳಾ ಕಾರ್ಯಕರ್ತರ ಮೇಲೂ ಪೊಲೀಸರು ಪೂರ್ವಗ್ರಹ ಪೀಡಿತರಾಗಿ ವರ್ತಿಸಿದ್ದರು. ಏಕಮುಖವಾಗಿ ವರ್ತಿಸುತ್ತಿರುವ ಬಜಪೆ ಪೊಲೀಸರ ವಿರುದ್ಧವಾಗಿ ಶಿಸ್ತಿನ ಕ್ರಮ ಕೈಗೊಳ್ಳುವ ಮೂಲಕ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಂದು ಪಾಪ್ಯುಲರ್ ಫ್ರಂಟ್ ಬಜಪೆ ವಲಯಾಧ್ಯಕ್ಷ ಅಶ್ರಫ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
A neo social movement for a new India of equal rights to all Indians

















































