School Chalo 2012

ಪ್ರಭಾಕರ್ ಭಟ್‌ರನ್ನು ಕೂಡಲೇ ಬಂಧಿಸಿ - ಎನ್‌ಡಬ್ಲೂಎಫ್ ಆಗ್ರಹ

Monday, February 6th, 2012
ಮಂಗಳೂರು: ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಸಮಾಜೋತ್ಸವ ಸಭೆಯಲ್ಲಿ  ಮುಸ್ಲಿಂ ಶರೀಅತ್ ಮತ್ತು ಮುಸ್ಲಿಂ ಮಹಿಳೆಯರ ಬಗ್ಗೆ  ಕಲ್ಲಡ್ಕ ಪ್ರಭಾಕರ ಭಟ್  ಅವಹೇಳನಕಾರಿಯಾಗಿ  ಮಾತನಾಡಿದನ್ನು NWF ಮಂಗಳೂರು ಜಿಲ್ಲಾ ಸಮಿತಿ ಖಂಡಿಸಿದೆ.
ಸಾಮಾನ್ಯವಾಗಿ ಸಂಘಪರಿವಾರದ ಮಂದಿ ಮಹಿಳೆಯರನ್ನು ತಾಯಿ, ಮಾತೆ, ದೇವತೆಗಳೆಂದು ಬೊಗಳೆ ಬಿಡುತ್ತಿರುತ್ತಾರೆ. ಓರ್ವ ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ್ಯದ ನಾಯಕನಾಗಿರುವ ಪ್ರಭಾಕರ್ ಭಟ್ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಮಹಿಳೆಯರ ಬಗ್ಗೆ ಸಂಘಪರಿವಾರ ಹೊಂದಿರುವ ಹೀನ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಎನ್‌ಡಬ್ಲುಎಫ್ ಹೇಳಿದೆ.
ಉಪ್ಪಿನಂಗಡಿಯಲ್ಲಿ ಮುಸ್ಲಿಮರನ್ನು ಮತ್ತು  ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿ ಕೋಮುಪ್ರಚೋದನೆಗೈದ ಪ್ರಭಾಕರ ಭಟ್ ನ ಮೇಲೆ ಈಗಾಗಲೇ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 (ಅ) ಮತ್ತು 295 ಎ ಪ್ರಕರಣದಡಿ ಯಲ್ಲಿ  ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಭಟ್‌ರನ್ನು ಬಂಧಿಸಿಲ್ಲ. ಸಮಾಜೋತ್ಸವದ ಹೆಸರಿನಲ್ಲಿ ಒಂದು ಕೋಮನ್ನ್ನು ಗುರಿಯಾಗಿಸಿ ಅವಹೇಳನ ಮತ್ತು ಕೋಮುಪ್ರಚೋದಕ ಭಾಷಣಗಳನ್ನು ಸಂಘಪರಿವಾರವು ಲಾಗಾಯ್ತಿನಿಂದಲೂ  ನಡೆಸಿಕೊಂಡು ಬಂದಿದೆ. ಕರಾವಳಿ ಪ್ರದೇಶದಲ್ಲಿ ನಡೆದ ಗಲಭೆಗಳಲ್ಲಿ ಸಾರ್ವಜನಿಕರು  ಜೀವ, ಮಾನ, ಸೊತ್ತುಗಳನ್ನು ಕಳೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರೀತಿಯ ಸಮಾಜೋತ್ಸವಗಳು ನಾಡಿನ ಸಾಮರಸ್ಯವನ್ನು ಕೆಡಿಸಿವೆ ಎಂದು ಎನ್‌ಡಬ್ಲುಎಫ್ ಹೇಳಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಾದರೆ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿ ಧರ್ಮನಿಂದನೆ  ಮಾಡಿದ  ಪ್ರಭಾಕರ್ ಭಟ್‌ರನ್ನು ಕೂಡಲೇ ಬಂಧಿಸಬೇಕೆಂದು ಎನ್‌ಡಬ್ಲುಎಫ್ ಆಗ್ರಹಿಸಿದೆ.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India