ಪಾವೂರು: ಎಸ್‌ಡಿಪಿಐಯಿಂದ ದಾರಿದೀಪ ವ್ಯವಸ್ಥೆ
Saturday, February 18th, 2012
ಪಾವೂರು: ಎಸ್‌ಡಿಪಿಐ ವತಿಯಿಂದ ಪಾವೂರು ಗ್ರಾಮ ಪಂಚಾಯತಿಗೊಳಪಟ್ಟ ಪ್ರದೇಶದಲ್ಲಿ ಹದಗೆಟ್ಟ ದಾರಿದೀಪಗಳ ಸ್ಥಳದಲ್ಲಿ ಹೊಸ ದೀಪದ ವ್ಯವಸ್ಥೆ ಮಾಡಲಾಗಿದೆ.
ಸುಮಾರು 30 ಸಾವಿರ ರೂಪಾಯಿ ಮೊತ್ತದ ಹೊಸ ದೀಪಗಳನ್ನು ಖರೀದಿಸಿ ಪಾವೂರು ಗ್ರಾಮ ಪಂಚಾಯತ್ ಸದಸ್ಯ ನಾಸೀರ್ ಮಲಾರ್ ಮತ್ತು ಎಸ್‌ಡಿಪಿಐ
ಸ್ಥಳೀಯ ನಾಯಕ ಹಾರಿಸ್ ಮಲಾರ್‌ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಷಾ ಮತ್ತು ಪಂಚಾಯತ್ ಅದ್ಯಕ್ಷಕಾದರ್ ಇನೋಳಿರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್‌ನ ಎಲ್ಲಾ ಸದಸ್ಯರು ಮತ್ತು ಎಸ್‌ಡಿಪಿಐ ನಾಯಕರಾದ ಹನೀಫ್ ಮಲಾರ್, ಐ.ಎಸ್ ಹನೀಫ್, ಶಮೀರ್ ಮಲಾರ್, ರಾಜೇಶ್ ಇನೋಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಎಸ್‌ಡಿಪಿಐಯ ಈ ಕೊಡುಗೆಯನ್ನು ಪಂಚಾಯತ್ ಅಧ್ಯಕ್ಷರು ಶ್ಲಾಘಿಸಿದರು.
A neo social movement for a new India of equal rights to all Indians


















































