Saturday, April 28th, 2012
ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಮಾನಹಾನಿಕರ ವರದಿಯನ್ನು ಪ್ರಕಟಿಸಿರುವುದರ ವಿರುದ್ಧ ಕಾನೂನು ಪ್ರಕ್ರಿಯೆಯ ಪಾರಂಭಿಕ ಹಂತವಾಗಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್ರವರು ಹಲವು ಮಾಧ್ಯಮಗಳಿಗೆ ನೊಟೀಸು ಜಾರಿ ಮಾಡಿದ್ದಾರೆ.
ಹಿಂದಿ ದಿನಪತ್ರಿಕೆಗಳಾದ ದೈನಿಕ್ ಜಾಗರಣ, ನವ ಭಾರತ ಟೈಮ್ಸ್, ಇಂಗ್ಲಿಷ್ ದಿನಪತ್ರಿಕೆಗಳಾದ ಇಂಡಿಯನ್ ಎಕ್ಸ್ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ಏಶ್ಯನ್ ಏಜ್, ಡೆಕ್ಕನ್ ಕ್ರೊನಿಕಲ್, ಇಂಗ್ಲಿಷ್ ಚಾನೆಲ್ಗಳಾದ ಟೈಮ್ಸ್ ನೌ, ಸಿಎನ್ಎನ್ ಐಬಿಎನ್, ವಾರ ಪತ್ರಿಕೆ ದಿ ಸಂಡೆ ಗಾರ್ಡಿಯನ್ ವಿರುದ್ಧ ನೊಟೀಸು ಜಾರಿ ಮಾಡಿರುವುದಾಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅವರು ಹೇಳುವಂತೆ ಈ ಪತ್ರಿಕೆಗಳು ಮತ್ತು ಚಾನೆಲ್ಗಳು ಪಾಪ್ಯುಲರ್ ಫ್ರಂಟ್ ಬಗ್ಗೆ